ಮಕ್ಕಳ ಗರಿಷ್ಟ ಹಿತ ಸಾಧಿಸಲು ಬಾಲಗೃಹಗಳನ್ನು ಪರಿವರ್ತಿಸುವದು.


ಮಕ್ಕಳ ಗರಿಷ್ಟ ಹಿತ ಸಾಧಿಸಲು ಬಾಲಗೃಹಗಳನ್ನು ಪರಿವರ್ತಿಸುವದು.
ನಮ್ಮ ದೇಶದಲ್ಲಿನ  ದೇಶದ ಬಹುಸಂಖ್ಯಾತ ಬಾಲಗೃಹಗಳು ಮಕ್ಕಳ ಪೋಷಣೆ , ಸ೦ರಕ್ಷಣೆ , ಮೂಲಭೂತ ಅವಶ್ಯಕತೆಗೆ ಸಂಬಂಧಿಸಿದಂತೆ ಅನೇಕ ಸವಾಲುಗಳನ್ನು ಎದುರಿಸುತ್ತಿವೆ.  ಇಂತಹ  ಸಮಸ್ಯೆಗಳ ನಿವಾರಣೆಗಾಗಿ ಅನೇಕ ತೊಡಕುಗಳಿದ್ದರೂ ಕೂಡ ಸೂಕ್ತ ಮಧ್ಯಸ್ತಿಕೆ ಹಾಗೂ  ಸಮಪ೯ಕವಾದ  ಸಿಬ್ಬಂದಿಯಿಂದ ಮಕ್ಕಳ ಸವಾ೯೦ಗೀಣ ಅಭಿವೃಧ್ಧಿಯನ್ನು ಸಾಧಿಸಬಹುದಾಗಿದೆ. ಇದನ್ನು ಝಾರಖಂಡ ರಾಜ್ಯದ ರಾಂಚಿಯ ಸಮೀಪದ ಹಾತಿಯಾದಲ್ಲಿ ಅತ್ಯುತ್ತಮವಾಗಿ ಮಾಡಿ  ತೋರಿಸಿದ್ದಾರೆ. ಇಲ್ಲಿಯ  ಮಹಿಳೆಯರ ಪರಿವೀಕ್ಷಣಾ  ಗೃಹವು ಕಳೆದುಹೋದ  ಮಕ್ಕಳಿಗೆ , ಮಾನಸಿಕ ಮತ್ತು ಬೌಧ್ಧಿಕವಾಗಿ ದುರಾಚರಣೆಗೆ  ಒಳಗಾದ  ತರುಣಿಯರಿಗೆ , ಕಾನೂನಿನ ಜತೆಯ ಸಂಘಷ೯ದಲ್ಲಿ  ಆಪಾದಿತರಾದ  ಹುಡುಗಿಯರಿಗೆ   ಮತ್ತು  ಪ್ರೀತಿಸಿದ ಹುಡುಗರ ಜೊತೆ  ಓಡಿಹೋದ  ಅಪ್ರಾಪ್ತ ಬಾಲಕಿಯರನ್ನು  ಕೂಡಿಡುವ  ಸ್ಥಳವಾಗಿತ್ತು.

ಸದರಿ  ಬಾಲ  ಗೃಹವು  ೧೯೮೧ ರಿಂದ  ಬಂದಿಖಾನೆಯ ವ್ಯಾಪ್ತಿಗೆ  ಒಳಪಟ್ಟಿತ್ತು. ಈ ಬಂದೀ ಖಾನೆಗಳಲ್ಲಿ ಕೂಡಿಟ್ಟ ಜನರಿಗೆ ಜೀವಿಸಲಿಕ್ಕೆ  ಸಾಕಾಗುವ ಅತಿ  ಕಡಿಮೆ ಅವಶ್ಯಕತೆಗಳನ್ನು   ಮಾತ್ರ   ಪೂರೈಸಲಾಗುತ್ತಿತ್ತು.  ಈ ನಾಲ್ಕು  ಗೋಡೆಗಳ ಮಧ್ಯೆ  ಅನೇಕ ಹೆಣ್ಣು ಮಕ್ಕಳು  ಯೌವನವಸ್ಥೆಯಲ್ಲೆಯೇ   ಕಾಲಿಟ್ಟು ನಿಗ೯ತಿಕ ಬಾಳನ್ನು ಸವೆಸಿದರು.

ತದನ೦ತರ ಸ್ವಯ೦ ಸೇವಕರ ಅವಿರತ ಪ್ರಯತ್ನ ಮತ್ತು  ನ್ಯಾಯಾಂಗ  ವ್ಯವಸ್ಥೆಯ  ಮಧ್ಯಸ್ಥೆಕೆಯಿಂದ ಅಲ್ಲಿನ ನಿವಾಸಿಗಳ ಜೀವನಶೈಲಿ ಗಣನೀಯವಾಗಿ  ಬದಲಾವಣೆಗೊಂಡಿತು.  ಸದರಿ  ಗೃಹದ  ನಿವಾಸಿಗಳ ಮೂಲಭೂತ ಅವಶ್ಯಕತೆ  ಈಡೇರಿಕೆಗಾಗಿ  ಬೇಕಾದ ಎಲ್ಲ  ಅವಶ್ಯಕ ವಸ್ತುಗಳನ್ನು ಪೂರೈಸಲಾಯಿತು.  ಇದರ ಫಲವಾಗಿ ೬೦ ಜನ ಯಾರಿಗೂ ಬೇಡದ  ವ್ಯಕ್ತಿಗಳು  , ಎಲ್ಲರಿಗೂ ನಗುಮುಖದ ಮಹಿಳೆಯರು ಮತ್ತು ಮಕ್ಕಳಾಗಿ ಪರಿವರ್ತನೆ  ಗೊಂಡರು
೨೦೦೫ ರಲ್ಲಿ ಒಂದು  ಸ್ವಯಂ ಸೇವಕ ಗುಂಪಿನ  ಮಧ್ಯಸ್ಥಿಕೆಯಿಂದ ಅಲ್ಲಿಯ  ಭೌತಿಕ ಮೂಲಭೂತ ಸೌಕರ್ಯಗಳು  ಹೀನಾಯ   ಸ್ಥಿತಿಯಲ್ಲಿರುವುದು  ಗೊತ್ತಾಯಿತು. ಅವರೆಲ್ಲ. ಗಾಳಿ ಬೆಳಕು ಇಲ್ಲದ    ಕೋಶದಂತೆ  ಇರುವ  ಕಿರು ಕೋಣೆಗಳಿಗೆ  ಅವರನ್ನು ಕೂಡಿಟ್ಟಿದ್ದರು.  ಅಲ್ಲಿ  ಸಮಯಾನುಸಾರ  ನೀರು ಸರಬರಾಜು ಇರಲಿಲ್ಲ. ಮತ್ತು   ಪೂರೈಸಿದ ಆಹಾರವು ಕೀಳು ಮಟ್ಟದ್ದಾಗಿತ್ತು  ಮತ್ತು ಅದು ಸಾಕಾಗುತ್ತಿರಲಿಲ್ಲ.  ಅಲ್ಲಿ  ಯಾವುದೇ ವಿದ್ಯಾಭ್ಯಾಸದ ಮತ್ತು  ವೃತ್ತಿ ಸಂಭಂಧದ  ತರಬೇತಿ  ಇರಲಿಲ್ಲ .  ಮತ್ತು  ಮಕ್ಕಳನ್ನು  ಅವರವರ ಕುಟುಂಬಗಳಿಗೆ  ಮರಳಿ ಸೇರಿಸುವ ಕೆಲಸವನ್ನು  ಯಾರೂ ಮಾಡಿರಲಿಲ್ಲ.  ಆರೋಗ್ಯದ ಕಾಳಜಿಯೂ  ಅತೀ ವಿರಳವಾಗಿತ್ತು. ಮತ್ತು ವಿಭಿನ್ನ ಕುಶಲತೆಯ ಮಕ್ಕಳ ನ್ನು ಕುರಿತು ಯಾವುದೇ ಕಾಳಜಿ ಇರಲಿಲ್ಲ.

إرسال تعليق

أحدث أقدم